ಜರ್ಮನಿಕ್ ಭಾಷೆಗಳು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಸಂಬಂಧಿತ ಭಾಷೆಗಳ ಕುಟುಂಬ. ಕ್ರಿ.ಪೂ. ೧ನೇ ಸಹಸ್ರಮಾನದ ಮಧ್ಯದಲ್ಲಿ ಈ ಭಾಷೆಗಳ ಪೂರ್ವಜ ಭಾಷೆ ಪ್ರೊಟೊ-ಜರ್ಮನಿಕ್ ಉಕ್ಕಿನ ಯುಗದಲ್ಲಿದ್ದ ಉತ್ತರ ಯುರೋಪ್ನಲ್ಲಿ ಉದ್ಭವವಾಯಿತೆಂದು ನಂಬಲಾಗಿದೆ. ಇಂದಿನ ಕಾಲದಲ್ಲಿ ಸುಮಾರು ೩೮೦ ಮಿಲಿಯನ್ ಮಾತುಗಾರರಿರುವ ಆಂಗ್ಲ ಮತ್ತು ೧೨೦ ಮಿಲಿಯನ್ ಮಾತುಗಾರರಿರುವ ಜರ್ಮನ್ ಭಾಷೆಗಳು ಈ ಕುಟುಂಬದ ಅತ್ಯಂತ ದೊಡ್ಡ ಭಾಷೆಗಳಾಗಿವೆ.